ಕೋವಿಡ್ -19:ಕಳೆದ ನಾಲ್ಕು ವರ್ಷದ ಹಿಂದೆ ಇಡೀ ಜಗತ್ತನ್ನೇ ಆವರಿಸಿ ಲಕ್ಷಾಂತರ ಜನರ ಪ್ರಾಣ ತೆಗೆದುಕೊಂಡು ಪ್ರಪಂಚದ ಎಲ್ಲ ವರ್ಗದ ಜನರಿಗೆ ದೊಡ್ಡ ಕೈಗಾರಿಕೆ, ಸಣ್ಣ, ಮತ್ತು ಗುಡಿ ಕೈಗಾರಿಕೆಗೆ ಆದ ನಷ್ಟವನ್ನು ಸುಧಾರಿಸಿಕೊಳ್ಳುವ ಮೊದಲೇ, ಅದರ ಕಹಿ ನೆನಪು ಮಾಸುವ ಮುನ್ನವೇ ಮತ್ತೆ ಕೋವಿಡ್ ರೂಪಾoತರವಾಗಿ ಮತ್ತೆ ಜಗತ್ತಿನ ಮುಂದೆ ಆಟ ಶುರು ಮಾಡಿದೆ.
ಈ ವರ್ಷ ಅಂದರೆ 2024 ಏಪ್ರಿಲ್ ನಲ್ಲಿ US ನಲ್ಲಿ ಹೊಸ ರೂಪಾoತರ ತಳಿ ಮೊದಲ ಬಾರಿಗೆ ಪತ್ತೆ ಯಾಗಿದೆ.ಈ ಹೊಸ ತಳಿಗೆ ವೈದ್ಯಲೋಕ, KP-2, ಎಂದು ನಾಮಕರಣ ಮಾಡಲಾಗಿದೆ
ಈ ಸೊಂಕು ನಮ್ಮ ಭಾರತದಲ್ಲೂ ಕೆಲವು ಪ್ರಕರಣ ಗಳು ಬೆಳಕಿಗೆ ಬಂದಿವೆ, ಮಹಾರಾಷ್ಟ್ರದಲ್ಲೂ ಕೆಲವು ಕೇಸ್ ಗಳು ಪತ್ತೆಯಾಗಿವೆ ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಯಾವುದೇ ಕೇಸ್ ಗಳು ಪ್ರಕರಣಗಳ ಬಗ್ಗೆ ಮಾಹಿತಿ ಲಭ್ಯ ಇರುವುದಿಲ್ಲ.
ಈ ರೂಪಾoತರ ತಳಿ ಎಂದು ಕರೆಸಿ KP-2 ಈ ರೋಗದ ಲಕ್ಷಣಗಳು,, ಕೆಮ್ಮು, ವಾಕರಿಕೆ,ಗಂಟಲುನೋವು, ಕೆಮ್ಮು, ಆಯಾಸ, ತಲೆನೋವು, ರುಚಿಯನಷ್ಟ, ಇಂತ ಲಕ್ಷಣಗಳು ಕಂಡು ಬಂದರೆ ಕೂಡಲೇ ನಿಮ್ಮ ಹತ್ತಿರದ ಹಾಸ್ಪಿಟಲ್ಗೆ ಹೋಗಿ ಡಾಕ್ಟರ್ ಸಂಪರ್ಕ ಮಾಡಿ ಖಚಿತ ಪಡಿಸಿ ಕೊಳ್ಳಿ.
ಮನುಕುಲ ಇದರಿಂದ ದೂರವಿರಲು ಇಂದೇ ಕೋವಿಡ್ ಸಮಯದಲ್ಲಿ ಅನುಸರಿಸಿದ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೆ ಪಾಲಿಸಿಕೊಂಡು ತಮ್ಮ ತಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಬೇಕು.
ಸುರಕ್ಷಿತ ಕ್ರಮಗಳು
1. ಜನರ ಗುಂಪಿನಿಂದ ದೂರವಿರುವುದು ಅಥವಾ ಮಾಸ್ಕ್, ಧರಿಸುವುದು
2. ಮೇಲೆ ತಿಳಿಸಿರುವ ಲಕ್ಷಣಗಳು ಕಂಡುಬದರೆ ಕೂಡಲೇ ವೈದ್ಯರನ್ನು ಸಂಪರ್ಕ ಮಾಡುವುದು
3. ಊಟ ಮಾಡುವಾಗ ಅಥವಾ ಹೊರಗಿನಿಂದ ಬರುವಾಗ ಕೈ ಸ್ವಚ್ಛತೆ ಮಾಡುವುದು.
Leave a Reply