Skip to content

ಮಧುಮಹ, ಸಕ್ಕರೆ ಕಾಯಿಲೆ (Diabetics)

Spread the love

 

 

ಮಧುಮೇಹ ಅಥವಾ ಸಿಹಿಮೂತ್ರ ಕಾಯಿಲೆ ಪುರಾತನ ಕಾಲದಿಂದಲೂ ಬಂದ, ಪ್ರಪಂಚದ ಎಲ್ಲೆಡೆಯೂ ಪಸರಿಸಿದ ಸಾಮಾನ್ಯ ರೋಗವಾಗಿದೆ. ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗಿ ಮೂತ್ರದಲ್ಲಿ ಅದು ವಿಸರ್ಜಿಸಲ್ಪಟ್ಟಿದೆ.

ಈ ರೋಗಕ್ಕೆ ಮಧುಮೆಹಿಗಳ ವಂಶಪರಂಪರೆ, ಕೊಬ್ಬು, ಸಕ್ಕರೆ ತುಂಬಿದ ತಿಂಡಿ ತಿನಸು, ಮಿತಿಮೀರಿದ ಸೇವನೆ, ಮೋಜಿನ ಜೀವನ, ಮಾನಸಿಕ ಒತ್ತಡ, ವ್ಯಾಯಾಮದ ಅಭಾವ, ಇವೆಲ್ಲ ಕಾರಣದಿಂದ ಈ ಕಾಯಿಲೆ ಕಾಣಿಸಿ ಕೊಳ್ಳುತ್ತದೆ.

 

 

 

ಜಠರದ ಮೇಲ್ಬಾಗದಲ್ಲಿರುವ ಸೂರ್ಯಗ್ರಂಥ (pancreas) ಸರಿಯಾಗಿ ಕೆಲಸ ಮಾಡದೇ ಇನ್ಶೂಲಿನನ್ನು ಉತ್ಪಾದನೆಗೊಳಿಸದಿದ್ದರೆ ಆಹಾರದಲ್ಲಿ ಸಕ್ಕರೆ ಅಂಶ ಜೀರ್ಣವಗದಿರುತ್ತದೆ. ಅದರಿಂದ ದೇಹಶಕ್ತಿ ಕುಂದಿ ವಿವಿಧ ತೊಂದರೆಗಳು ತೋರಿಬರುತ್ತವೆ. ಹೆಚ್ಚಿದ ಮೂತ್ರವಿಸರ್ಜನೆ, ಮಿತಿಮೀರಿದ ಆಯಾಸ, ಬಾಯಾರಿಕೆ, ದೇಹದ ತೂಕ ಕುಂದುವುದು, ದೃಷ್ಟಿಮಾಂದ್ಯಾ, ಹೆಚ್ಚಿದ ರಕ್ತದ ಒತ್ತಡ, ಮತ್ತು ಕಿಡ್ನಿಯ ತೊಂದರೆಗಳು ಸಹ ಮೂಡಿಬರಬಹುದು. ದೇಹದಲ್ಲಿ ಗಾಯಗಳೆನಾದರೂ ಆದರೆ ಬೇಗ ಗುಣ ವಾಗದೆ ಇರುವುದು.

 

 

 

ಇದಕ್ಕಿರುವ ಸಾಮಾನ್ಯ ಔಷದಿ ಎಂದರೆ ಇನ್ಶೂಲಿನ ಇಂಜೆಕ್ಷನ್ ಅಥವಾ ಮಾತ್ರೆಗಳ ಸೇವನೆಯಾಗಿದೆ. ಆದರೆ ಇದು ರೋಗ ನಿವಾರಕ ಔಷದಿಯಲ್ಲ. ಜೀವನವಿಡೀ ಸೇವಿಸುತ್ತೀರಬೇಕಾದ ಒಂದು ಚಿಕಿತ್ಸೆ ವಿಧಾನವಾಗಿದೆ.

ಇತ್ತೀಚಿನ ಸಂಶೋಧನೆಗಳಿಂದ ತಕ್ಕ ಯೋಗಾಭ್ಯಾಸ ಮತ್ತು ಆಹಾರ ನಿಯಮಗಳನ್ನು ಪಾಲಿಸುತ್ತ ಬಂದರೆ ಆರಂಭವೆವಸ್ಥೆಯಲ್ಲಿರುವ ಈ ಕಾಯಿಲೆ ಗುಣವಾಗುತ್ತದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *