Skip to content

ವಕ್ತಿತ್ವ ಮತ್ತು ವಿಕಾಸ (Personality and Development)

Spread the love

 

ಇದು ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದಕ್ಕಾಗಿ ಎಳೆ ವಯಸ್ಸಿನ ಯುವಕ, ಯುವತಿಯರು ಅರೋಗ್ಯಶೀಲಾ ಶರೀರ, ಒಪ್ಪುವ ವೇಷಭೂಷಣ, ಹುರುಪು ತುಂಬಿದ ನಡೆನುಡಿ ಮುಂತಾದುವನ್ನು ಪಡೆದುಕೊಂಡಿರಲು ಆಸಕ್ತಿ ವಹಿಸಬೇಕು. ನಿರ್ಮಲಮನಸ್ಸಿನ ದ್ಯೋತಕವಾಗಿರುವ ಪ್ರಸನ್ನಮುಖ, ಮಾನವನ ಸಮರ್ಥ ವಕ್ತಿತ್ವವನ್ನು ಸೂಚಿಸುತ್ತದೆ. ಅಂತವನು ತಾನು ಕೈಗೊಂಡ ಉದ್ಯೋಗ ಅಥವಾ ವ್ಯವಹಾರದಲ್ಲಿ ಅವಶ್ಯ ಜಯಶಿಲಾನೂ ಆಗುತ್ತಾನೆ. :ಸರಳ ಜೀವನ :ಮೇಲಮಟ್ಟಕ್ಕೆ ಚಿoತನೆ’ಮಾನವನ ಜೀವನೋದ್ದೇಶ ವಾಗಿರಬೇಕು. ಆಗ ದೇಹ, ಮನಸ್ಸು, ಬುದ್ದಿ ಮುಂತಾದುವೆಲ್ಲಾ ಚುರುಕಾಗಿದ್ದು ತಾನು ನೆಮ್ಮದಿಯಿಂದಿರುತ್ತಾನೆ. ಬೇರೆಯವರನ್ನು ಖುಷಿ ಪಡಿಸುತ್ತಾನೆ.

 

 

ಈ ಗುರಿ ಸಾಧಿಸಬೇಕಾದರೆ ಹಿತ ಮಿತ ಆಹಾರವನ್ನು ನಿಯತಕಾಲದಲ್ಲಿ ಸೇವಿಸಬೇಕು. ಸಕಾಲದಲ್ಲಿ ನಿದ್ರೆ, ವಿಶ್ರಾಂತಿಯ ಸುಖವನ್ನು ಸಾಧಿಸಬೇಕು. ದೇಹಕ್ಕಾಗಲಿ, ಮನಸ್ಸಿಗಾಗಲಿ ಶಕ್ತಿಮೀರಿದ ಕೆಲಸದ ಒತ್ತಡ ಹೇರಿ ಅವನ್ನು ದುರ್ಬಲಗೊಳಿಸಬಾರದು. ನಡುರಾತ್ರಿಯ ವರೆಗಿನ ಎಡಬಿಡದೆ ಕೆಲಸ, ಅಧ್ಯಯನ, ಮಾತುಕತೆ ಮುಂತಾದುವು ಕಣ್ಣು, ಕಿವಿ, ಮುಂತಾದ ಇಂದ್ರಿಯಗಳ ಹಾಗೂ ಮಿದುಳಿನ ನರವ್ಯೂಹದ ದೌರ್ಬಲ್ಯಕ್ಕೆ ಕಾರಣವಾಗುತ್ತದೆ. ಇದಲ್ಲದೆ, ದುರಭ್ಯಾಸ ಗಳಾದ ಧೂಮಪಾನ, ಮದ್ಯಪಾನ, ಜುಜಾಟ, ಹಾಗೂ ದುರ್ಜನ ಸಂಪರ್ಕ, ಮೊದಲಾದುವೆಲ್ಲಾ ಮಾನವ ಜೀವನವನ್ನೇ ಕೆಡಿಸಿ, ಅಪಾರ ಹಾನಿಉಂಟು ಮಾಡುತ್ತವೆ. ಕ್ರಮೇಣ ರಕ್ತದ ಒತ್ತಡ ಹೆಚ್ಚಿ ನಿದ್ರಾಭಾವ, ನಿಶ್ಯಕ್ತಿ, ಆಜೀರ್ಣ ಮುಂತಾದುವೆಲ್ಲಾ ಒಂದರಾಮೇಲೊಂದು ತಲೆದೂರಾಳರಂಭಿಸುತ್ತವೆ.

 

              ಈಗೆ ಆಗದಂತೆ ನೋಡಿಕೊಂಡು ದಿನಕ್ಕೆ ಅರ್ಧಗಂಟೆ ಯಷ್ಟದರೂ ಯೋಗಾಭ್ಯಾಸ ಅಥವಾ ಸರಳ ವ್ಯಾಯಾಮ ಮತ್ತು ಧ್ಯಾನದ ಅಭ್ಯಾಸ ಇಟ್ಟುಕೊಂಡುದಾದರೆ  ವಯಸ್ಸೇರುತ್ತಾ ಬಂದರು ದೇಹ ಮನಸ್ಸು ಬುದ್ದಿಗಳ ಶಕ್ತಿ ಕುಗ್ಗೆದೆ ಉಳಿದು ಮೊದಲಿನಂತೆಯೇ ಕೆಲಸ ಮಾಡುತ್ತ ಹೋಗಲು ಸಾಧ್ಯವಾಗುತ್ತದೆ

Leave a Reply

Your email address will not be published. Required fields are marked *