ರಾಜ್ಯದಲ್ಲಿ ಡೆಂಗ್ಯೂ ಜ್ವರವೂ ಹೆಚ್ಚಿನ ಜನರಲ್ಲಿ ದಿನ ದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತನ್ನ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಿದೆ ಮತ್ತು ಜನರು ಹೆಚ್ಚಿನ ಚಿಕಿತ್ಸೆಗೆಂದು ದಾಖಲಾಗುವ ರೋಗಿಗಳಿಗೆ “”ಕಾರ್ಪೋರೆಟ್ “” ಹಾಸ್ಪಿಟಲ್ ಗಳಲ್ಲಿ ಹಣ ಸುಲಿಗೆ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ ಎಂದು ಅದರಿಂದ ಅಧಿಕಾರಿಗಳಿಗೆ ಈ ಕಡೆ ಗಮನ ಹರಿಸಲು ಸರ್ಕಾರ ಸೂಚನೆ ನೀಡಿದೆ.
ಸಾರ್ವಜನಿಕರು ಕೂಡ ಸರ್ಕಾರದ ಜೊತೆ ಕೈಜೋಡಿಸಿ ಡೆಂಗ್ಯೂ ರೋಗ ಬರದಂತೆ ಸಹಕರಿಸ ಬೇಕು ಎಂದು ಅರೋಗ್ಯ ಇಲಾಖೆ ಸೂಚನೆ ನೀಡಿದೆ.
ಮಳೆಗಾಲ ಶುರು ಆದಾಗ ಅನೇಕ ಕಡೆಗಳಲ್ಲಿ ನೀರು ಸಂಗ್ರಹಣೆ ಆಗುತ್ತದೆ. ಮನೆಯ ಮುಂದೆ, ಹಿಂದೆ, ತಿಪ್ಪೆಗಳಲ್ಲಿ ತೆಂಗಿನಕಾಯಿ ಚಿಪ್ಪು, ವಾಹನದ ಟಯರ್ ಗಳಲ್ಲೂ, ನೀರು 4-5 ದಿನದಿಂದ ನೀರು ಸಂಗ್ರವಾದರೆ ಅಲ್ಲಿ ಈಡಿಸ್ ಸೊಳ್ಳೆ ಮೊಟ್ಟೆ ಇಟ್ಟು ಸಂತಾನ ಮಾಡಿಕೊಳ್ಳುತ್ತದೆ. ಅದರಿಂದ ಜನರು ಮೊದಲು ಇದರ ಕಡೆ ನೀರು ಸಂಗ್ರಹವಾಗದಂತೆ ಗಮನ ಅರಿಸಬೇಕು. “”””ಇದು ಸಾಮಾನ್ಯವಾಗಿ ಹಾಗಲಿನಲ್ಲಿ ಜನರಿಗೆ ಕಡಿಯುತ್ತವೆ.””””
ಈ ಸೊಳ್ಳೆಯಿಂದ ಕಡಿತಾಕ್ಕೋಳಗಾಗುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದು ಸರ್ವೇಯ ಪ್ರಕಾರ ರಾಜ್ಯದಲ್ಲಿ ಜನವರಿಯಿಂದ ಜೂನ್ ಅಂತ್ಯಕ್ಕೆ ಒಟ್ಟು 6200 ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಅತಿ ಹೆಚ್ಚು ಪ್ರಕರಣಗಳು ಹಳ್ಳಿ ಪ್ರದೇಶದಲ್ಲಿ ಅಂದರೆ ಶೇ 60% ಮತ್ತು ನಗರ ಪ್ರದೇಶದಲ್ಲಿ ಶೇ 40% ರಷ್ಟು ಪ್ರಕರಣಗಳು ವಾರದಿಯಾಗಿವೆ.
ಡೆಂಗ್ಯೂ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ತೆಗೆದುಕೊಂಡ ಕ್ರಮಗಳು.