Skip to content

ರಾಜ್ಯದಲ್ಲಿ ಮತ್ತೆ ಜಾತಿ ವ್ಯವಸ್ಥೆ ತಾಂಡವ ಆಡುತ್ತಿದೆ .

Spread the love

                ರಾಜ್ಯದಲ್ಲಿ ಮತ್ತೆ ಜಾತಿ ವ್ಯವಸ್ಥೆ ತಾಂಡವ ಆಡುತ್ತಿದೆ .

                                      ( ದೇವಸ್ಥಾನದ ಒಳಗಡೆ ನಿರಾಕರಣೆ )

 

                       ಜಾತಿ ವ್ಯವಸ್ಥೆಯ ಬಗ್ಗೆ ಈ ಹಿಂದೆ ಇದೆ ಪೇಜಿನಲ್ಲಿ ಪ್ರಕಟಗೊಂಡಿದೆ  ”ಚಿಕ್ಕಮಗಳೂರು ” ದಲಿತ ಯುವಕರು   ದೇವಸ್ಥಾನ ಪ್ರವೇಶ ಮಾಡಿದಕ್ಕೆ ದೇವಸ್ಥಾನದ ಪೂಜೆ ಸ್ಥಗಿತ ಗೊಳಿಸಿರುವ ಘಟನೆ ಮಾಸುವ ಮುನ್ನವೇ ಮತ್ತೆ   ಗೌರಿಬಿದನೂರಿನಲ್ಲಿ ಮತ್ತೆ ಇಂತ ಪ್ರಸಂಗ ಬೆಳಕಿಗೆ ಬಂದಿದೆ ತಾಲ್ಲೋಕಿನ ತೊಂಡೇಬಾಲಿ ಹೋಬಳಿ ಬೆಳಬೆಕ್ಕಣ ಹಳ್ಳಿಯಲ್ಲಿ ಶುಕ್ರವಾರ ವೆಂಕಟರಮಣ ದೇವಾಯದಲ್ಲಿ ನೆಡೆದಿದೆ .ಅದೇ ಗ್ರಾಮದ ಯುವಕ ದೇವಸ್ಥಾನದ ಪೂಜೆಗೆಂದು ದೇವಸ್ತಾನಕ್ಕೆ ಹೋಗುವಾಗ ಬಾಗಿಲಲ್ಲೆ ತಡೆದು ನಿಲ್ಲಿಸಿದ್ದಾರೆ .
                   ಅನಾದಿ ಕಾಲದಿಂದಲೂ ದಲಿತ ದಲಿತ ವ್ಯಕ್ತಿ ಎಂದರೆ ಕೆಲ ವರ್ಗದ ಜನರಿಗೆ ಅವರು ಕೀಳು ,ಗುಲಾಮರು ,ಎನ್ನುವ ಮನೋಭಾವ ಬೆಳೆದು ಕೊಂಡು ಬಂದಿದೆ .ಮೇಲ್ವರ್ಗದ ಜನರು ದಲಿತ ವ್ಯಕ್ತಿಗಳಿಗೆ ಶತಮನಗಳಿಂದಲೂ ಅವಮಾನ ,ಸಂಕಟ ,ಕಿರುಕುಳ ಕೊಡುತ್ತಾನೆ ಬರುತ್ತಿದ್ದಾರೆ ,ಇದು ಮುಂದುವರೆದು ಕೊಂಡು ಇಲ್ಲಿಯವರೆಗೂ ತಂದು ನಿಲ್ಲಿಸಿದ್ದಾರೆ .

 

                 ಮಾತಿಗೆ ಮಾತ್ರ ನಾವೆಲ್ಲರೂ ಒಂದು ಎನ್ನುವವರ ಕೆಲ ವರ್ಗದ ಜನರ ಮನೆಗಳಿಗೆ ಬಿಡಿಸಿ ಕೊಳ್ಳದ ಮನಸ್ಥಿತಿ ನಮ್ಮ ಭಾರತೀಯರಲ್ಲಿ ಬೇರೂರಿದೆ .
                 ಭಾರತೀಯ ಸಮಾಜದಲ್ಲಿ ದಶಕಗಳಿಂದಲೂ ಒಂದು ಕಹಿ ಸತ್ಯವಾಗಿದೆ .ಜಾತಿ ವ್ಯವಸ್ಥೆಯ ಅನಿವಾರ್ಯ ,ಪರಿಣಾಮ ,ದಲಿತರ ಸಾಮಾಜಿಕ ,ಆರ್ಥಿಕ ಮತ್ತು ರಾಜಕೀಯವಾಗಿ ,ತಾರತಮ್ಯಕ್ಕೆ ಒಳಗಾಗುತ್ತಿದ್ದಾರೆ .
                 ದೇವಸ್ಥಾನ ಕಟ್ಟುವುದಕ್ಕೂ ದಳಿತರನ್ನು ಬಳಸಿ ಕೊಳ್ಳುವ ಜನರನ್ನು ದೇವಸ್ಥಾನದ ಪೂಜೆಗೆ ಮಾತ್ರ ಹೊರಗಿಡುತ್ತಾರೆ. ಇದು ಈ ನೆಲದ ಸಂಸೃತಿ ಎಂದು ಹೇಳಿದರು ತಪ್ಪಾಗಲಾರದು .
              ”’ ಮೀಸಲಾತಿ ಬಗ್ಗೆ ಮಾತನಾಡುವ ಜನರು ಜಾತಿಪದ್ದತಿಯ ಬಗ್ಗೆ ಯಾರು ಮಾತನಾಡುವುದಿಲ್ಲ ”’
            ಕಾರಣ ಅವನೊಬ್ಬ ದಲಿತ ಮುಂದೆ ಬರಲಿ ಎಂಬ ಉದ್ದೇಶ ಯಾರಿಗೂ ಇರೊಲ್ಲ ಆದರೆ ಸರ್ಕಾರ ಮತ್ತು ಸಂವಿಧಾನ ಕೊಡುವ ಸವಲತ್ತಿನ ಬಗ್ಗೆ ಮಾತ್ರ ಬೊಬ್ಬೆ ಹೊಡೆದು ಕೊಳ್ಳುತ್ತಾರೆ .ನಾವೆಲ್ಲರೂ ಒಂದು ಎನ್ನುವ ವರ್ಗದ ಜನರು ದಲಿತರಿಗೆ ದೇವಸ್ಥಾನದ ಒಳಗೆ ಪ್ರವೇಶ ಇಲ್ಲ ಎಂಬ ಘಟನೆ ಕೇಳಿ ಬರುತಿದ್ದಂತೆ ಏನು ಗೊತ್ತೇ ಇಲ್ಲ ಎನ್ನುವವರು ಹಲವರಿದ್ದಾರೆ .

 

                                                    ಘಟನೆ  ಬಗ್ಗೆ ಮಾತಾಡೋಣ    
 
          ಈ ದೇಗುಲಕ್ಕೆ ಪ್ರವೇಶ ಕ್ಕೆ ತಡೆ ಮಾಡಿರುವ ವ್ಯಕ್ತಿಗಳು ಸದ್ಯಕ್ಕೆ ತಲೆ ಮರೆಸಿ ಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ ಈ ವಿಷಯ ತಿಳಿದು ಸ್ಥಳಕ್ಕೆ ದಾವಿಸಿ ಗ್ರಾಮ ಪರಿಶೀಲನೆ ಮಾಡಿರುವ ಆದೀಕರಿಗಳ ತಹಶೀಲ್ದಾರ್  ಮಹೇಶ್ ಪತ್ರಿ ,dysp ಶಿವಕುಮಾರ್ ,ಸಬ್ ಇನ್ಸ್ಪೆಟ್ಟರ್ ಸಾತ್ಯನಾರಾಯಣ ,ಶನಿವಾರ ಗ್ರಾಮಕ್ಕೆ ಬೇಟಿ ನೀಡಿ ದಲಿತ ಮುಖಂಡರು  ಮತ್ತು ಗ್ರಾಮದ ಸದಸ್ಯರ  ಸಮ್ಮುಕದಲ್ಲಿ  ಶಾಂತಿ ಸಬೆ ನೆಡೆಸಲಾಯಿತು .ಬಳಿಕ ದೇವಸ್ಥಾನ ಒಳಗೆ ಕರೆದೊಯ್ದರು .
 
           ಇಂತಹ ಅಧಿಕಾರಿಗಳಿಂದ ದಲಿತರ ಮುಖದಲ್ಲಿ ಮಂದಹಾಸ ಮೂಡಿ ಬಂದಿರುತ್ತದೆ ಎಂದು ಮುಖಂಡರು ಅಭಿನಂದನೆ ತಿಳಿಸಿದ್ದಾರೆ .
 
 
          ಇನ್ನಷ್ಟು ಮಾಹಿತಿಗಾಗಿ ಫಾಲೋ ಮಾಡಿ ..,,,,,,
                                                                               ಕನ್ನಡ ಫ್ರೀ ಟೈಮ್ ನ್ಯೂಸ್ ,,,,,,,,,,,,,,,,,,,,,,,,,
 

1 thought on “ರಾಜ್ಯದಲ್ಲಿ ಮತ್ತೆ ಜಾತಿ ವ್ಯವಸ್ಥೆ ತಾಂಡವ ಆಡುತ್ತಿದೆ .”

Leave a Reply

Your email address will not be published. Required fields are marked *