ಆಗ ಮೂರೂ ಹೊತ್ತು ಗಂಜಿ ಮಾಡಿ ಕುಡಿಯಬೇಕು.
ಒಂದೆರಡು ದಿನ ಮಾಡಿರಿ. ಅದಕ್ಕೆ ಮನೆಮದ್ದಿನ ಅವಶ್ಯಕತೆ ಇರುವುದಿಲ್ಲ
ಉದ್ಯೋಗಕ್ಕೆ ಹೊರಗಡೆ ಹೋಗುವವರು ಆಗಿದ್ರೆ, ಹೊಟ್ಟೆ ಹಸಿವಾದಾಗ ಕುಡಿಯೋದಿಕ್ಕೆ ಗಂಜಿಯನ್ನೇ extra ತಗೊಂಡು ಹೋಗಿರಿ.
ಯಾವುದೇ ಗಂಜಿ ಆಗಿರ್ಬೋದು. ನಿಮಗೆ ರುಚಿಯಾಗಿ ಮಾಡೋಕೆ ಬಂದ್ರೆ ಒಗ್ಗರಣೆ ಕೂಡ ಹಾಕಿ. ಗಂಜಿ ತೆಳುವಾಗಿ ಮಾಡ್ಬೇಡಿ. ಕೇಸರೀಬಾತ್ ಗಿಂತ ಸ್ವಲ್ಪ ತೆಳು ಮಾಡಿದ್ರೆ ಸಾಕು.
ಖಾರ, ಹುಳಿ ಇರುವ ಯಾವುದೇ ಪದಾರ್ಥ ಒಂದೆರಡು ದಿನ ತಿನ್ನಬೇಡಿ. ಹೊಟ್ಟೆಗೆ ವಿಶ್ರಾಂತಿ ಕೊಟ್ರೆ ಹೊಟ್ಟೆ ನಿಮಗೆ ಸಹಾಯ ಮಾಡುತ್ತದೆ.
ನಾವು ದೇಹದ ಜೊತೆಗೆ ಪರಸ್ಪರ ಹೊಂದಾಣಿಕೆ ಮಾಡ್ಕೋಬೇಕಾಗುತ್ತೆ..
ಇಲ್ಲಾ ಅಂದ್ರೆ ಹಾಸ್ಪಿಟಲ್ ವಾಸ, ಡ್ರಿಪ್ಸ್ ತನಕ ಹೋಗೋ ಸಾಧ್ಯತೆ ಇರುತ್ತೆ. ದುಡ್ಡು ಪೋಯಿ ಪೋಯಿ..