
ಮನೆಯಲ್ಲಿ ಇರುವ ದೊಡ್ಡವರಿಗೆ ಈ ತೊಂದರೆ ತಿಳಿದಿರುವ ಮಾಹಿತಿ ಇದೆ. ಅನುವಂಶೀಯವಾದ ಸಕ್ಕರೆ ಖಾಯಿಲೆಯೆಂದರೆ ನಿಮಗೆ ತಿಳಿದಿದ್ದರೆ ನಿಮ್ಮ ಮನೆಯಲ್ಲಿ ಯಾರಿಗಾದರೂ ಇದೆಯೇ ಎಂದು. ವರ್ಷಕ್ಕೊಮ್ಮೆಯಾದರೂ ದೈಹಿಕವಾಗಿ ಎಲ್ಲ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಉತ್ತಮ. ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮವಾಗಿದೆ.
ಆದಷ್ಟು ಒಳ್ಳೆಯ ಆಹಾರ ಸೇವಿಸಿ. ದಿನನಿತ್ಯದ ಆಹಾರದಲ್ಲಿ ಕಾರ್ಬೋಹೈಡ್ರೇಟ್ಗಳು ಅಂದರೆ ಗೋಧಿ, ಅಕ್ಕಿ ಈ ರೀತಿಯ ಆಹಾರ ಪದಾರ್ಥಗಳನ್ನು ಕಡಿಮೆ ಸೇವಿಸಿ. ಜಾಹಿರಾತುಗಳಲ್ಲಿ ಗೋದಿ ಹಿಟ್ಟನ್ನು ಮಾರಾಟ ಮಾಡುವವರು ನಮ್ಮ ಗೋಧಿಗಿಂತ ಒಳ್ಳೆಯದು, ಹೊಟ್ಟೆ ಬರುವುದಿಲ್ಲ, ಸಕ್ಕರೆ ಖಾಯಿಲೆ ಬರುವುದಿಲ್ಲ ಎಂತೆಲ್ಲ ಹೇಳುತ್ತಾರೆ. ಕೇಳಿ ಮೂರ್ಖರಾಗದಿರಿ. ಗೋಧಿಯಲ್ಲೂ ಇರುವುದು ಕಾರ್ಬೋಹೈಡ್ರೇಟ್ಸ್. ಕಾಂಪ್ಲೆಕ್ಸ್ ಕಾರ್ಬ್ಸ್ ಅಂದರೆ ರಾಗಿ ಮಿಲ್ಲೆಟ್ ಕೀನ್ವಾದಿಂದ ಮಾಡಿದ ಪದಾರ್ಥಗಳನ್ನು ಸ್ವಲ್ಪ ಸೇವಿಸಿದರೆ ತೊಂದರೆ ಇಲ್ಲ. ಹಸಿರು ತರಕಾರಿಗಳು, ಸೊಪ್ಪುಗಳನ್ನು ತಟ್ಟೆ ಹಾಕಿಕೊಂಡು ಸ್ವಲ್ಪವೇ ಅನ್ನ ಅಥವಾ ರಾಗಿಯ ಪದಾರ್ಥಗಳನ್ನು ತಿನ್ನಬಹುದು. ಪ್ರೋಟೀನ್ ಹೆಚ್ಚಾಗಿ ಸೇವಿಸಿ. ಮಾಂಸ ಸೇವಿಸುವವರಾದರೆ ಕೊಬ್ಬು ಕಡಿಮೆ ಇರುವ ನೇರ ಮಾಂಸ ಪದಾರ್ಥಗಳನ್ನು ಸೇವಿಸಬಹುದು.
ಸಕ್ಕರೆ ಖಾಯಿಲೆ ಇರುವವರಷ್ಟೇ ಅಲ್ಲ ಇತ್ತೀಚಿಗೆ ಎಲ್ಲರೂ ನಮ್ಮ ಹಿಂದಿನವರ ತರ ಮೈ ಬಗ್ಗಿಸಿ ಕೆಲಸ ಮಾಡುತ್ತಿಲ್ಲ. ಕುಳಿತು ಮಾಡುವ ಕೆಲಸಗಳೇ ಹೆಚ್ಚಾಗಿವೆ. ಮಶೀನುಗಳು ನಮ್ಮನ್ನು ಇನ್ನಷ್ಟು ಕುಳಿತೆ ಇರುವಂತೆ ಮಾಡಿವೆ. ಆದ್ದರಿಂದ ದಿನಕ್ಕೆ 30 ನಿಮಿಷದಿಂದ 1 ಗಂಟೆಗೆಯವರೆಗಾದರು ಚೆನ್ನಾಗಿ ವ್ಯಾಯಾಮ ಮಾಡಬೇಕು. ದಯಮಾಡಿ ವೈದ್ಯರ ಸಲಹೆ ಮುಂದುವರಿಯಿರಿ.