ಮೈಗ್ರೇನ್ ಒಂದು ನರವೈಜ್ಞಾನಿಕ ರೋಗ ಲಕ್ಷಣ. ದೈಹಿಕ ಗ್ರಹಿಕೆಯನ್ನು ವ್ಯತ್ಯಾಸ್ತ ಗೊಳಿಸುವ ಇದು ವಿಪರೀತ ತಲೆನೋವು ಮತ್ತು ವಾಕರಿಕೆ ಮೊದಲಾವುಗಳಂತವನ್ನು ಉಂಟು ಮಾಡುತ್ತದೆ.ಶರೀರವೈಜ್ಞಾನಿಕವಾಗಿ ” ಮೈಗ್ರೇನ್ ತಲೆನೋವು ” ಒಂದು ನರವೈಜ್ಞಾನಿಕ ಸ್ಥಿತಿ. ಸಾಮಾನ್ಯವಾಗಿ ಪುರುಷರಿಗಿಂತ ಮಹಿಳೆಯರಲ್ಲಿ ಇದು ಹೆಚ್ಚು. ಮೈಗ್ರೇನ್ ತಲೆನೋವು ಏಕ ದಿಕ್ಕಿನಲ್ಲಿ ಮಿಡಿಯುತ್ತದೆ. ಇದು ನಾಲ್ಕರಿಂದ 72 ಗಂಟೆಗಳ ತನಕ ಇರುತ್ತದೆ. ಮೈಗ್ರೇನ್ ತಲೆನೋವಿನಿಂದ ಬಳಲುವ ಸರಿ ಸುಮಾರು ಮೂರನೇ ಒಂದರಷ್ಟು ಮಂದಿ ಅಸಮಾನ್ಯ ದೃಷ್ಟಿಯ. ಗ್ರಾಣ ಸಂಬಂಧಿ ಅಥವಾ ಇತರ ಇಂದ್ರಿಯ ಅನುಭವಗಳಇತರ ಇಂದ್ರಿಯ ಅನುಭವಗಳ ಸೆಳೆವು ಸೂಚನೆ (aura) ಯನ್ನು ಗ್ರಹಿಸುತ್ತಾರೆ. ಮೈಗ್ರೇನ್ ಕಾಣಿಸಿಕೊಳ್ಳುವುದರ ಮುನ್ಸೂಚನೆ ಲಕ್ಷಣಗಳು. ಪಾಕರಿಕೆ. ವಾಂತಿ. ವಿಪರೀತ ತಲೆನೋವು. ಇವುಗಳ ಶಮಾನಕ್ಕೆ ಔಷಧ ತೆಗೆದುಕೊಳ್ಳುವುದು ಮತ್ತು ಪ್ರಚೋದಕ ಕಾರಣಗಳಿಂದ ದೂರವಿರುವುದು ಆರಂಭಿಕ ಚಿಕಿತ್ಸೆಯಾಗಿದೆ. ಮೈಗ್ರೇನ್ ತಲೆನೋವಿಗೆ ಕೇವಲ ಮಾತ್ರೆ ತೆಗೆದುಕೊಳ್ಳಬೇಕು ಎಂದೇನಿಲ್ಲ. ಕೆಲವೊಂದು ನೈಸರ್ಗಿಕ ವಿಧಾನಗಳಲ್ಲಿ ಸುಲಭವಾಗಿ ತಲೆನೋವು ಮತ್ತು ಮೈಗ್ರೇನ್ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ನಮಗೆ ಆಗಾಗ ಕಂಡು ಬರುವ ಆರೋಗ್ಯ ಸಮಸ್ಯೆಗಳಲ್ಲಿ ತಲೆನೋವು ಒಂದು. ಕೆಲವರಿಗೆ ದೀರ್ಘಕಾಲ ಕಾಡುವ ತಲೆನೋವು ಮೈಗ್ರೇನ್ ಆಗಿ ಬದಲಾಗಿ ತುಂಬಾ ತೀರ್ವವಾಗಿ ಕಾಡುತ್ತದೆ. ಎಷ್ಟೋ ಜನರು ಇಂಥ ಮೈಗ್ರೇನ್ ತಲೆನೋವುಗಳನ್ನು ಸಹಿಸಿಕೊಳ್ಳಲಾಗದೆ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ. ವೈದ್ಯರ ಔಷಧಿ ತೆಗೆದುಕೊಂಡರು ಪರಿಹಾರವಾಗಲಿಲ್ಲ ಎನ್ನುವುದು ತುಂಬಾ ಜನರ ಮಾತು. ನಮ್ಮ ದೇಹದ ಕೆಲವೊಂದು ಭಾಗಗಳಲ್ಲಿ ಒತ್ತಡ ಹಾಕುವುದರಿಂದಒತ್ತಡ ಹಾಕುವುದರಿಂದ ನೋವು ನಿವಾರಣೆಯಲ್ಲಿ ಸಹಾಯಕವಾಗಲಿದೆ. ಏಕೆಂದರೆ ನಮ್ಮ ದೇಹದ ನಿರ್ದಿಷ್ಟ ಭಾಗಗಳಲ್ಲಿ ನಮ್ಮ ನರಮಂಡಲ ವ್ಯವಸ್ಥೆಯ ನರಗಳು ಕೊನೆಯಾಗಿರುತ್ತದೆ. ಇವುಗಳನ್ನು ಅಕ್ಯುಪ್ರೆಷರ್ ಪಾಯಿಂಟ್ ಎಂದು ಕರೆಯುತ್ತಾರೆ. ಮೈಗ್ರೇನ್ ತಲೆ ನೋವಿನ ಪರಿಹಾರಕ್ಕೆ ನೀವು ನಿಮ್ಮ ಹೆಬ್ಬೆರಳಿನ ಮತ್ತು ತೋರುಬೆರಳಿನ ಮಧ್ಯಭಾಗದಲ್ಲಿ ಸುಮಾರು ಐದು ನಿಮಿಷಗಳ ಕಾಲ ಭದ್ರವಾಗಿ ಒತ್ತಿ ಹಿಡಿದುಕೊಂಡಿರಬೇಕು. ನಿಮಗೆ ಪ್ರತಿ ಬಾರಿ ತಲೆ ನೋವು ಬಂದಾಗ ಇದೇ ರೀತಿ ಮಾಡಬಹುದು. ಇದನ್ನು ವೈದ್ಯಕೀಯ ಭಾಷೆಯಲ್ಲಿ LI-4 ಪಾಯಿಂಟ್ ಎಂದು ಕರೆಯುತ್ತಾರೆ. ಇನ್ನು ಕೇರಳದಲ್ಲಿ ಒಂದು ಆಯುರ್ವೇದ ಔಷಧಿ ಇದೆ. ಇದರ ಹೆಸರು ಮೈಗ್ರೋಕೋಟ್ ಆಯಿಲ್. ಇದು ಆನ್ಲೈನ್ನಲ್ಲಿ ಕೂಡ ಸಿಗುತ್ತದೆ. ರಾತ್ರಿ ಮಲಗುವ ಮುಂಚೆ ಚೆನ್ನಾಗಿ ತಲೆಗೆ ಹಚ್ಚಿ ಸ್ವಲ್ಪ ಮಸಾಜ್ ಮಾಡಿ ಮಲಗುವುದರಿಂದ ಉತ್ತಮ ನಿದ್ರೆ ಬರುತ್ತದೆ ತಲೆನೋವು ಕಡಿಮೆಯಾಗುತ್ತದೆ. ಆದರೆ ಒಂದೇ ದಿವಸದಲ್ಲಿ ಕಮ್ಮಿ ಆಗಬೇಕು ಎಂದರೆ ಕಮ್ಮಿ ಆಗೋದಿಲ್ಲ. ಒಂದು ಆರು ತಿಂಗಳು ಕೋರ್ಸ್ ಆದರೂ ಮಾಡಬೇಕು.