ಮಹಿಳೆಯರಲ್ಲಿ ಮೂಳೆ ಸವೆತ ಹೆಚ್ಚಾಗಿ ಕಂಡು ಬರಲು ಕಾರಣಗಳೇನು 

               ಮಹಿಳೆಯರಲ್ಲಿ ಮೂಳೆ ಸವೆತ ಹೆಚ್ಚಾಗಿ ಕಂಡು ಬರಲು ಕಾರಣಗಳೇನು

 

                     ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಬರುವ ಪ್ರಮುಖ ಕಾರಣಗಳಲ್ಲಿ ಮೂಳೆ ಸವೆತವು ಒಂದು ಎಂದು ಹೇಳಬಹುದು . ಅದರಲ್ಲೂ ಭಾರತದಂತಹ ಅಭಿವೃದ್ದಿ ಹೊಂದುತ್ತಿರುವ ದೇಶಗಳಲ್ಲಿ ಇದು ಹೆಚ್ಚಾಗಿ ಕಾಣ ಸಿಗುತ್ತದೆ .ಆರ್ಥಿಕ ವಲಯದಲ್ಲಿ ಒಂದು ನಾಣ್ಯದ ಎರೆಡು ಮುಖ ಎನ್ನುವಂತೆ ಗಂಡು -ಹೆಣ್ಣು ,ಇಬ್ಬರು ದುಡಿಯುತ್ತಿದ್ದಾರೆ .ಆದರೆ ಹೆಣ್ಣು ಮನೆಗೆಲಸ ,ಮತ್ತು ಹೊರಗೆ ಎರೆಡೂ ಕಡೆಗಳಲ್ಲಿ ದುಡಿಯುವ ಹೆಣ್ಣು ಮಕ್ಕಳಲ್ಲಿ ಆಗಾಗ್ಗೆ ಮೂಳೆ ಸಂಭಂದಿತ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜ ಮಹಿಳೆಯರು ಮನೆಗೆಲಸ ,ಅಡುಗೆ ಕೆಲಸ ,ಕುಟುಂಬ ,ನಿರ್ವಹಣೆಯಲ್ಲಿಯೇ ತಮ್ಮ ಸಮಯ ಕಳೆಯುತ್ತಾರೆ ,ಇದರಿಂದಲೇ ದೇಹಕ್ಕೆ ವ್ಯಾಯಾಮ ಸಿಗುತ್ತದೆ ಎಂದು ತಿಳಿದು ತಪ್ಪಾಗಿ ಭವಿಸುವುದರಿಂದ ಈ ರೀತಿ ಸಮಸ್ಯೆ ಹೆಚ್ಚಾಗಿ ಕಂಡುಬರಲು ಕಾರಣ .

 

 

                                                               ಇದಕ್ಕೆ ಕಾರಣಗಳು 
              
              ಮಹಿಳೆಯರು ಅಡುಗೆ ಮನೆಯಲ್ಲಿ ತುಂಬಾ ಹೊತ್ತು ನಿಂತಲ್ಲೆ ನಿಂತು ಕೊಂಡು ಅಡುಗೆ ಮಾಡುತ್ತಿರುತ್ತಾರೆ .
  
           ಈ ಕಾರಣದಿಂದಾಗಿ ಮಹಿಳೆಯರಲ್ಲಿ ” ಮಸ್ಕುಯೂ ಲೋಸ್ಕೇಲಿಟಿ ”’ಎಂಬ ಖಾಯಿಲೆ ಜೊತೆಗೆ ಅಶ್ವಸ್ತತೆ ,ಹೃದಯ ರಕ್ತನಾಳಗಳಾದ ಖಾಯಿಲೆ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತವೆ .ಇಂದಿನ ಕಾಲದ ಪದ್ದತಿಗೂ ಈಗಿನ ಕಾಲದ ಪದ್ದತಿಗೂ ಅಡುಗೆ ಮಾಡುವ ವಿಧಾನ ದಲ್ಲಿ ಬಹಳ ವ್ಯೆತ್ಯಾಸ ಇದೆ ,ಈಗಿನ ಕಾಲದಲ್ಲಿ ನಿಂತುಕೊಂಡು ಅಡುಗೆ ಮಾಡುವ ವ್ಯವಸ್ಥೆ ಹೆಚ್ಚಾಗಿ ದ್ದರಿಂದ ಮೂಳೆ ಸವೆತವೂ ಹೆಚ್ಚಾಗಿ ಕಂಡು ಬರುತ್ತಿದೆ .
            ಮಹಿಳೆಯರು ವ್ಯಾಯಾಮ ಮಾಡುವ ಸಮಯದಲ್ಲಿ ಬೆಳಗ್ಗೆ ಎದ್ದು ಮನೆಗೆಲಸ ,ಅಡುಗೆ ಕೆಲಸ, ಕುಟುಂಬ ನಿರ್ವಹಣೆಯಲ್ಲಿ ತಮ್ಮ ಸಮಯ ಕಳೆಯುತ್ತಾರೆ .ಅದರಿಂದ ವ್ಯಾಯಾಮ ಮಾಡದೆ ಮೂಳೆಗಳು ಕಾಲಕ್ರಮೇಣ ತನ್ನ ಸಾಂದ್ರತೆ ಕಳೆದುಕೊಳ್ಳುತ್ತದೆ .ಕ್ಯಾಲ್ಸಿಯಮ್ ಹಾಗೂ ವಿಟಮಿನ್  ”ಡಿ ” ಸೇರಿದಂತೆ ಅಗತ್ಯವಿರುವ ಪೋಷಕಾಂಶಗಳ ಆಹಾರದ ಕೊರತೆ ಇಂದಲೂ ಈ ಸಮಸ್ಯೆ ಕಾಣಿಸಿಕೊಳುತ್ತದೆ .

 

 

     
                                                               ತಡೆಗಟ್ಟುವ ವಿಧಾನ 
 
       1)  ನಿಯಮಿತ ವ್ಯಾಯಾಮದ ಅವಶ್ಯಕತೆ ಹೆಚ್ಚಿದೆ .
 
      2)  ಸೊಪ್ಪು ,ತರಕಾರಿಗಳನ್ನು ,ಕ್ಯಾಲ್ಸಿಯಮ್ ಮತ್ತು ವಿಟಮಿನ್ d ಸಮೃದ್ದವಾಗಿರುವ ಆಹಾರದ ಕಡೆ ಗಮನ ಹರಿಸಬೇಕು.
 
      3)  ಡೈರಿ , ಉತ್ಪನ್ನಗಳು , ಧಾನ್ಯಗಳಂತಹ , ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು .
 
     4 ) ಕೀಳುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ನಿಂತಿರುವಾಗ ಮತ್ತು ಕುಳಿತಿರುವಾಗ ಉತ್ತಮ ಭಂಗಿಯನ್ನು ಕಾಪಾಡಿಕೊಳ್ಳಿ .
 
     5) ಕೆಲಸದ ಸಮಯದಲ್ಲಿ ಮದ್ಯೆ ನಿಯಮಿತವಾಗಿ ವಿರಾಮ ತೆಗೆದುಕೊಳ್ಳುವುದು ಒಳ್ಳೆಯದು .
 
     6) ಮೂಳೆಗಳ ಸಮಸ್ಯೆಗಳನ್ನು ಮೊದಲೇ ಪತ್ತೆ ಹಚ್ಚಲು ನಿಯಮಿತವಾಗಿ ಮೊಳೆ ಸಾಂದ್ರತೆಯ ಸ್ಕ್ಯಾನ್ ಮಾಡಿಸುವುದು ಒಳ್ಳೆಯದು .
 
 
 
 
                                                         ಕನ್ನಡ ಫ್ರೀ ಟೈಮ್ ನ್ಯೂಸ್ ,,,,,,,,,,

Leave a Reply

Your email address will not be published. Required fields are marked *