ಬೊಜ್ಜು ಮೈ ಇಂದ ಆಗುವ ತೊಂದರೆಗಳು
ಬೊಜ್ಜು ಮೈ ತುಂಬಿದ ದೇಹ ಸಂಪನ್ನ ದೇಶಗಳ ಪ್ರಜೆಗಳಲ್ಲಿ ತೋರಿ ಬರುವ ಸಾಮಾನ್ಯ ಸಮಸ್ಯೆ.ಭಾರತದಲ್ಲಿ ಸಹ ಶ್ರೀಮಂತ ವರ್ಗದಲ್ಲಿ ಈ ದೃಶ್ಯ ಹೆಚ್ಚುತ್ತಿದೆ .ಬೊಜ್ಜು ಮೈ ಒಂದು ಕಾಯಿಲೆ ಅಲ್ಲದ್ದಿದರು ಕೂಡ ಇದು ಒಂದು ಭಯಂಕರ ಕಾಯಿಲೆಗಳಿಗೆ ಮೂಲಕಾರಣ ವಾಗುತ್ತದೆ.ಮದ್ಯೆ ವಯಸ್ಸಿನಲ್ಲೇ ಜನರು ತಮ್ಮ ಪ್ರಾಣಗಳನ್ನು ಕಳೆದುಕೊಳ್ಳಬಹುದು .
ಬೊಜ್ಜು ತುಂಬಿ ಬರುವುದು ,ಸ್ರೀ ಪುರುಷರಲ್ಲಿ ಸಾಮಾನ್ಯವಾಗಿದೆ ,ಬೇರೆ ಬೇರೆ ತರದಲ್ಲಿ ಕಂಡುಬರುತ್ತದೆ .ಸ್ರೀಯರಲ್ಲಿ ಸೊಂಟ ಮತ್ತು ತೊಡೆಗಳಲ್ಲಿ ಬೊಜ್ಜು ತುಂಬಿ ಬರುತ್ತದೆ .ಮತ್ತು ಪುರುಷರಲ್ಲಿ ಹೊಟ್ಟೆ ಮುಂದುಬರುವುದು ಹೆಚ್ಚಿಗೆ ಇರುತ್ತದೆ .ಆದರೆ ಸ್ತ್ರೀ ಪುರುಷ ಇಬ್ಬರಲ್ಲೂ ಇಡೀ ದೇಹ ಎಲ್ಲ ಅವರಿಸಿ ದೇಹ ಭಾರವಾಗಿ ಕಾಣುತ್ತದೆ .ಆಗ ಕೂತರೆ ಕುರೋಕೆ ಆಗೋಲ್ಲ ,ನಿಂತರೆ ನಿಲ್ಲೋಕೇ ಆಗೋಲ್ಲ ತುಂಬಾ ಕಷ್ಟ ಪರಿಸ್ತೀತಿ ಎದುರಾಗುತ್ತೆ .ಮಲಗಿದರೆ ನಿದ್ರೆ ಬರದೇ ಇರುವುದು ,ಮಿತಿ ಮೀರಿ ಗೊರಕೆ ,ಇವೆಲ್ಲ ಸಾಮಾನ್ಯವಾಗಿ ಹೋಗುತ್ತದೆ .ಅಂತ ಕಾಯಿಲೆಗಳಿಗೆ ಸಾಮಾನ್ಯ ಔಷದಿ ಏನು ಪರಿಣಾಮ ಬಿರುವುದಿಲ್ಲ .
ಇದರಿಂದ ಆಗುವ ತೊಂದರೆಗಳು
ಮುಖ್ಯವಾಗಿ ಹೃದಯಾಘಾತ ಬರುವುದು ಬೊಜ್ಜು ಮೈ ಇರುವವರಿಗೆ ಹೆಚ್ಚಿನವರಲ್ಲಿ ಕಾಣಿಸಿ ಕೊಳ್ಳುತ್ತದೆ .
ಅಲ್ಲದೆ ಹೆಚ್ಚಿನ ರಕ್ತದ ಒತ್ತಡ ,ಮಧುಮೇಹಿ ,ಮಾನಸಿಕ ಒತ್ತಡ ಕಾಯಿಲೆಗಳು ,ಅಜೀರ್ಣ ಸಮಸ್ಯೆ , ಕರುಳಿನ ಹುಣ್ಣು ,ನಪುಂಸಕತೆ ಮುಂತಾದುವೆಲ್ಲ ಬೊಜ್ಜು ಮೈ ದೇಹದವರಲ್ಲಿ ಸರ್ವೇ ಸಾಮಾನ್ಯ ,ಅಲ್ಲದೆ ಬೊಜ್ಜು ಮೈ ದೇಹದವರು ನಮ್ಮನ್ನು ನೋಡಿದರೆ ಇತರರೆ ಜನರು ಗೇಲಿ ಮಾಡುವವರು ಎಂದು ಕೀಳರಿಮೆ ಕಾಡುತ್ತದೆ .
ಬೊಜ್ಜು ಮೈ ಬರಲು ಕಾರಣ
ಇದಕ್ಕಿರುವ ಪ್ರಮುಖ ಕಾರಣಗಳೆಂದರೆ ಅತಿಯಾದ ಆಹಾರ ಸೇವನೆ. ತಮ್ಮ ಮನೆಯಲ್ಲಿ ಹಿರಿಯರಿಗೆ ಅಂದರೆ ತಂದೆ – ತಾಯಿ ಗಳಲ್ಲಿ ಈ ತರ ಬೊಜ್ಜು ಮೈ ಇದ್ದರೆ ಇದು ಮಕ್ಕಳ ಮೇಲೂ ಪ್ರಭಾವ ಬೀರುತ್ತದೆ .ಸರಿಯಾದ ವ್ಯಾಯಾಮ ಇಲ್ಲದಿದ್ದರೆ ಇದು ಹೆಚ್ಚಾಗುವ ಸಂಬವ ಜಾಸ್ತಿ ಇರುತ್ತದೆ .
ಇವರ ಅಭ್ಯಾಸ ಗಳು ;ಹೆಚ್ಚು ಹೆಚ್ಚು ತಿನ್ನುವುದು ,ಬೇಗೆ ಬೇಗೆನೆ ತಿನ್ನುವುದು ,ಊಟ ಮಾಡಿ ತಕ್ಷಣನೆ ಮಲಗುವುದು ,ಕೊಬ್ಬು ತುಂಬಿದ ಸಿಹಿ ಪದಾರ್ಥಗಳನ್ನು ಪದೇ ಪದೇ ತಿನ್ನುವುದು ,ಐಗೆ ಮಾಡಿದರೆ ಮೈಭಾರದಿಂದ ಸೋಮಾರಿತನವೂ ಬೆಳೆದು ಬರುತ್ತದೆ .ದೇಹಕ್ಕೆ ದಣಿವು ಕೊಡದೆ ಇರುವುದರಿಂದ ದೇಹದ ತೂಕ ಏರುತ್ತಾ ಹೋಗುತ್ತದೆ ,ಮತ್ತೆ ಕೆಲವರಿಗೆ ಗ್ರಂಥಿ ಗಳ ಕಾಯಿಲೆ ಮತ್ತು ಹೃದಯ ರೋಗಗಳಿಂದನು ಬೊಜ್ಜು ಮೈ ಬರುತ್ತದೆ .ಇದು ಪ್ರತ್ಯೇಕ ಕಾಯಿಲೆ ಆಗಿರುವುದರಿಂದ ಡಾಕ್ಟರ್ ಸಲಹೆ ಪಡೆದು ಕೊಳ್ಳುವುದು ಉತ್ತಮ .
Leave a Reply