ರಾಜ್ಯದ ಕೆಲವು ಪ್ರದೇಶಗಳಲ್ಲಿ  ”ಇಲಿ ಜ್ವರದ ” ಆತಂಕದ ಬೀತಿ ,                              

                            

                                        
                               ಇಲಿ ಜ್ವರವು ಒಂದು ಸಂಕ್ರಮಿಕ ರೋಗವಾಗಿದೆ . ಇಲಿಗಳಿಂದ ಮಾನವರಿಗೆ ಹರಡುವ ಸಂಕ್ರಮಿಕ ರೋಗ .ಈ ರೋಗವನ್ನು ಇಲಿಯ ಮಾಲ ,ಮೂತ್ರ ಮತ್ತು ಲಾಲಜನಕದಿಂದ ಹರಡುವ ವೈರಸ್ ಅಥವಾ  ಬ್ಯಾಕ್ಟೀರಿಯಾಗಳು ಉಂಟುಮಾಡುತ್ತವೆ.ಸಾಮಾನ್ಯವಾಗಿ ಸೋಂಕಿತ ಇಲಿ ಹೆಗ್ಗಣ ,ಬೆಕ್ಕು ,ನಾಯಿ ,ನಾರಿ ,ತೊಳ,ಮುಂತಾದ ಪ್ರಾಣಿಗಳ ಮೂಲಕ ಮಾನವರಿಗೆ ಹರಡುತ್ತದೆ .
                       
                          ಇಲಿ ಹಾಗೂ ಇತರರೆ ಪ್ರಾಣಿಗಳ ಮಲ ಅಥವಾ ಮೂತ್ರದ ಮೂಲಕ ಹೊರಗೆ ಬರುವ ಬ್ಯಾಕ್ಟೀರಿಯಾ ,ಮಣ್ಣು ,ಅಥವಾ ನೀರಿನ ಜೊತೆ ಸೇರಿ ನಂತರ ಮಾನವನ ದೇಹ ಸೇರುತ್ತದೆ .ಮೂಗು ,ಕಣ್ಣು ಗಳ ಮೂಲಕ ರೋಗಾಣು ಗಳು ದೇಹ ಸೇರುವ ಸದ್ಯತೆ ಇರುತ್ತದೆ .ಕಲುಷಿತ ನೀರಿನಿಂದ ತೊಳೆಯುವ ತರಕಾರಿ ಮತ್ತು ಆಹಾರ ಪದಾರ್ಥಗಳನ್ನುಸೇವಿಸುವುದರಿಂದ ಹಾಗೂ ಬರಿಗಾಲಿನಿಂದ ಓಡಾಡುವಾಗ ಮಣ್ಣಿನಲ್ಲಿರುವ ರೋಗನುಗಳು ದೇಹ ಸೇರುವ ಸದ್ಯತೆ ಇರುತ್ತದೆ .ರೈತರು ,ಮಲಿನ ನೀರಿನಲ್ಲಿ ಕೆಲಸ ಈ ರೋಗ ತಗುಲುವ ಸದ್ಯತೆ ಹೆಚ್ಚು ಎಂದು ವೈದ್ಯರು ಹೇಳುತ್ತಾರೆ .
                           

 

                                ”””””   ಇಲಿ ಜ್ವರದ ಲಕ್ಷಣಗಳು ಈ ಕೆಳಗಿ೦ನತಿವೆ ”””””’

               ಜ್ವರ ,ತಲೆನೋವು ,ಸೊಂಟ , ವಾಂತಿ ,ಹೊಟ್ಟೆನೋವು ,ಮೂತ್ರದಲ್ಲಿ ,ಹೆಪ್ಪುಗಟ್ಟುವಿಕೆ  ,ಮೂಗಿನಲ್ಲಿ ರಕ್ತ ಸೋರುವುದು ,ಕಣ್ಣು ಕೆಂಪಗಿರುವುದು ,ವಾರದ ನಂತರ ಕಣ್ಣು ಹಳದಿ ಹಗುವುದು ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು ಎಂದು ವೈದ್ಯರು ಸಲಹೆ ನೀಡುತ್ತಾರೆ .
                                    

                                   

                        ಇಲಿಯ ರೋಗವು ಬರದಂತೆ ಕೆಲವು ಕ್ರಮಗಳು ಪಾಲಿಸಿದರೆ ಸಾಕು 

   ೧)    ಮಲಿನ ನೀರಿನಲ್ಲಿ ತರಕಾರಿಗಳನ್ನು ತೊಳೆಯುವುದನ್ನು ನಿಲ್ಲಿಸಬೇಕು .
   ೨)    ಕುದಿಸಿ ಹರಿಸಿದ ನೀರನ್ನು ಸೇವಿಸುವುದು ಉತ್ತಮ .
   ೩)   ಪ್ರಾಣಿಗಳು ಓಡಾಡುವ ನೀರಿನಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಬೇಕು . 
   ೪)  ಕುಡಿಯುವ ನೀರಿನಲ್ಲಿ ಪ್ರಾಣಿಗಳ ಮೂತ್ರ ಸೇರಿಕೊಳ್ಳದಂತೆ ನೋಡಿಕೊಳ್ಳುವುದು .
   ೫ )  ರೋಗನುಗಳು ಸಾಕುಪ್ರಾಣಿಗಳಲ್ಲಿ ಇರುವ ಸದ್ಯತೆ ಹೆಚ್ಚು ಇರುವುದರಿಂದ ಕೆರೆ ,ಕಟ್ಟೆ ,ನಿಂತ ನೀರಿನಲ್ಲಿ ಸ್ಥಾನ ಮಾಡಬಾರದು .

Leave a Reply

Your email address will not be published. Required fields are marked *

Prev :
Next :