ಹೃದಯಘಾತ ಹೆಚ್ಚಲು ಕಾರಣ ಮತ್ತು ನಿವಾರಣೆಗೆ ಕೆಲವು ಸೂತ್ರಗಳು

         

            ಮಾನವನ ದೇಹದ ಎಲ್ಲ ಭಾಗದಲ್ಲಿ ಸದಾ ರಕ್ತ ಪರಿಚಲನೆ ಇರುವಂತೆ ಮಾಡುವ ಅಂಗ “ಹೃದಯ”.

           ಇಡೀ ಹೃದಯ ಮಾವಿನಕಾಯಿ ಆಕಾರದಲ್ಲಿ ಇದ್ದು ವಯಸ್ಕರಲ್ಲಿ ಇದರ ತೂಕ ಸುಮಾರು ‘300’ ಗ್ರಾಂ ಮತ್ತು ಮಕ್ಕಳಲ್ಲಿ ಅದು ಅವರ ಮೈ ತೂಕಕ್ಕೆ ಹೋಲಿಸಿದರೆ ಹೆಚ್ಚು ತೂಕವಾಗಿರುತ್ತದೆ. “25” ದಿವಸಗಳ ಗರ್ಭವೆವಸ್ಥೆಯಲ್ಲಿ ಪ್ರಾರಂಭವಾಗುವ ಹೃದಯದ ಬಡಿತ ಜೀವನ ಪರ್ಯಂತ ಬಡಿಯುತ್ತಲೇ ಇರುತ್ತದೆ.

         ಸಾಮಾನ್ಯ ವ್ಯೆಕ್ತಿಯ ಹೃದಯವು ‘ಐದು ‘ಲೀಟರ್ನಷ್ಟು ರಕ್ತವನ್ನು ಪಂಪ್ ಮಾಡುತ್ತದೆ. ರಕ್ತವು ಹೃದಯದಿಂದ ಅಪದಮನಿ ಎಂಬ ರಕ್ತನಾಳಗಳಿಗೆ ಸಂಚರಿಸಿ, ನಂತರ ಲೋಮನಳ ಎಂಬ ಸಣ್ಣ ರಕ್ತನಾಳಗಳಿಗೆ ಹರಿದು ಕೊನೆಯಲ್ಲಿ ಅಭಿದಮನಿಗೆ ಸಂಚರಿಸಿ ಹೃದಯಕ್ಕೆ ಮರಳುತ್ತದೆ. ಸುಮಾರು “60”ಸೆಕೆಂಡುಗಳಲ್ಲಿ ನೆಡೆದು ಹೋಗುವ ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ರಕ್ತವು ನಮ್ಮ ದೇಹದ ಮೂಳೆಗಳಿಗೆ, ಮಾಂಸಖoಡಗಳಿಗೆ, ಜೀವಕೋಶಗಳಿಗೆ ಮತ್ತು ಇತರ ಎಲ್ಲ ಅವಯವಾಗಳಿಗೆ ಶುದ್ದರಕ್ತ ಸಹಿತ ಆಮ್ಲಜನಕದೊಂದಿಗೆ ಸಂಪೂರ್ಣ ಆರೈಕೆ ನೀಡುತ್ತದೆ.

          ಇತ್ತೀಚಿನ ದಿನಗಳಲ್ಲಿ ಒಂದು ಸರ್ವೇಯ ಪ್ರಕಾರ ಚಿಕ್ಕವಯಸ್ಸಿನಿಂದ ಹೃದಯಘಾತಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.

        ಹೃದಯಘಾತಕ್ಕೆ ಕೆಲವು ಕಾರಣಗಳು 

            ಹೃದಯವು ಬಲಗೊಲ್ಲುವುದಕ್ಕೆ ನಿಮ್ಮ ದೇಹದ ತೂಕವನ್ನು ಅಧಿಕ ಕೊಲೆಸ್ಟ್ರೇಲ್ ಮಟ್ಟವನ್ನ ಸಮತೋಲನದಲ್ಲಿ ಇಟ್ಟುಕೊಳ್ಳುವುದು,ರಕ್ತದಲ್ಲಿನ ಅಧಿಕಾವಾದ ಸಕ್ಕರೆ ಮಟ್ಟ ಮತ್ತು ಅಧಿಕ ರಕ್ತದೋತ್ತವನ್ನು  ನಿಯಂತ್ರದಲ್ಲಿ ಇಟ್ಟುಕೊಳ್ಳುವುದು ತುಂಬಾನೇ ಮುಖ್ಯವಾಗಿದೆ.
    

         ಹೃದಯವು ಲವಲವಿಕೆ ಇಂದ ಇರಲು ಕೆಲವು ಸೂತ್ರಗಳು  

         ನಿಮ್ಮ ಹೃದಯಕ್ಕೆ ಸಂಪೂರ್ಣ ವಿವಿಧ ವ್ಯಾಯಾಮದ ಅಗತ್ಯವಿದೆ. 
              1: ಪ್ರತಿರೋದ ತರಬೇತಿ : ಇದು ಕೊಬ್ಬನ್ನು ಕಡಿಮೆ ಮಾಡಲು ಮತ್ತು ತೆಳ್ಳಗಿನ ಸ್ನಾಯುವಿನ ದ್ರವ್ಯರಾಶಿಯನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. ಈ ವ್ಯಾಯಾಮದಲ್ಲಿ “ಬಾರ್ ಬೆಲ್ ” ಗಳಂತಹವುಗಳನ್ನು ಎತ್ತುವುದು.
           ಪುಶ್ -ಅಪ್ಗಳು ದೇಹ ನಿರೋದಕ ವ್ಯಾಯಾಮ ಸೇರಿದೆ.  
            
           2: ಏರೋಬಿಕ್ಸ್ ವ್ಯಾಯಾಮ :ಈ ವ್ಯಾಯಾಮವು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಅಲ್ಲದೆ ರಕ್ತದೋತ್ತದ, ಮತ್ತು ಹೃದಯ ಬಡಿತವನ್ನು ಸಮತೋಲನದಲ್ಲಿ ಇರುವಂತೆ ಮಾಡುತ್ತದೆ. ಏರೋಬಿಕ್ಸ್ ವ್ಯಾಯಾಮವು ಹೃದಯ ಸಂಬಂದಿಸಿದ ಕಾಯಿಲೇ ಮತ್ತು “ಮದುಮೇಹ “ಅಂತ ಅಪಾಯವನ್ನು ಕಡಿಮೆ ಮಾಡುತ್ತದೆ.
     
              ನೀವು ಈಗಾಗಲೇ ಸಕ್ಕರೆ ಕಾಯಿಲೆಗೆ ತುತ್ತಗಿದ್ದಾರೆ, ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ವನ್ನು ಕಡಿಮೆ ಮಾಡಲು ಸಹಕಾರಿ ಯಾಗಿರುತ್ತದೆ 
      
             

               
            ಈ ವ್ಯಾಯಾಮದಲ್ಲಿ ಬಿರುಸಿನ ನಡಿಗೆ, ಈಜು, ಟೆನಿಸ್, ಸೈಕಲ್ ಓಡಿಸುವುದು, ಹೃದಯದ ಅರೋಗ್ಯ ಕಾಪಾಡುವ ಈ ಏರೋಬಿಕ್ಸ್ ವ್ಯಾಯಾಮವನ್ನು ವಾರದಲ್ಲಿ “5”ದಿನ ಮತ್ತು ದಿನದಲ್ಲಿ “30”ನಿಮಿಷ ಗಳ ಕಾಲ ಮಾಡಿದರೆ ಸಾಕು ಎಂದು ವೈದ್ಯರು ಸಲಹೆ ನೀಡುತ್ತಾರೆ.
           
           

Leave a Reply

Your email address will not be published. Required fields are marked *