ಶನಿವಾರ ಮಾಂಸಾಹಾರ ಸೇವನೆ ಯಾಕೆ ಮಾಡಬಾರದು 

ಎಷ್ಟೋ ಜನ ವಾರದಲ್ಲಿ ಮೂರ್ನಾಲ್ಕು ಬಾರಿಯಾದರೂ ನಾನ್ವೆಜ್ ತಿನ್ನುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಕೆಲ ಮಂದಿ ಮಾತ್ರ ವಾರಪೂರ್ತಿ ನಾನ್ವೆಜ್ ತಿಂದರೂ ಶನಿವಾರ ಮಾತ್ರ ಜಪ್ಪಾಯ ಅಂದ್ರೂ ನಾನ್ವೆಜ್ ಮುಟ್ಟುವುದಿಲ್ಲ. ಅಷ್ಟಕ್ಕೂ ಇದರ ಹಿಂದೆ ವೈಜ್ಞಾನಿಕ ಕಾರಣವಿದ್ಯಂತೆ. ಅದೇನಪ್ಪಾ ಅಂತೀರಾ?

ಶನಿವಾರದಂದು ಮಾಂಸಾಹಾರವನ್ನು ತಿನ್ನಬಾರದು ಎಂದು ಹಲವಾರು ದಶಕಗಳಿಂದ ನಮ್ಮ ಹಿರಿಯರು ಹೇಳಿಕೊಂಡು ಬಂದಿದ್ದಾರೆ. ಏಕೆಂದರೆ ಈ ಸಮಯದಲ್ಲಿ ಭೂಮಿಯ ಮೇಲೆ ಚಂದ್ರನ ಪ್ರಭಾವದಿಂದಾಗಿ ನಮ್ಮ ಜೀರ್ಣಾಂಗ ವ್ಯವಸ್ಥೆಯು ಸ್ವಲ್ಪ ದುರ್ಬಲವಾಗುತ್ತದೆ. ಇದರಿಂದ ಜೀರ್ಣಕ್ರಿಯೆಗೆ ತೊಂದರೆ ಉಂಟಾಗಬಹುದು

ಅಲ್ಲದೇ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಬಹುತೇಕ ಮಂದಿ ಆರೋಗ್ಯದ ದೃಷ್ಟಿಯಿಂದ ಹಿರಿಯರ ಆಜ್ಞೆ ಪಾಲಿಸುತ್ತಾ ಬಂದಿದ್ದಾರೆ.ಇನ್ನೂ ಧಾರ್ಮಿಕ ವಿಚಾರಕ್ಕೆ ಬಂದರೆ ಒಂದಷ್ಟು ಜನ ಶನಿವಾರ ಶನಿ ಮಹಾತ್ಮ ಮತ್ತು ಆಂಜನೇಯ ಸ್ವಾಮಿಯನ್ನು ಆರಾಧಿಸುತ್ತಾರೆ. ಹಾಗಾಗಿ ನಾನ್ವೆಜ್ ಸೇವನೆ ಮಾಡುವುದಿಲ್ಲ.