ರಕ್ತದ ಒತ್ತಡಕ್ಕೂ ಕೋಪಕ್ಕೂ ಸಂಬಂಧವಿದೆಯೇ? ಮುಂದೆ ಓದಿ

ಹೌದು ಇದೆ. ಆದರೆ ಬಿಪಿ ಇದ್ದರೂ ಕೆಲವರು ಶಾಂತವಾಗಿರುತ್ತಾರೆ. ಆದರೆ ರಕ್ತ ಸಂಚಾರ ತಲೆಯ ಭಾಗದಲ್ಲಿ ಹೆಚ್ಚಾದರೆ ನಿಮ್ಮ ಮಾತು ಹಿಡಿತ ಕಳೆದುಕೊಳ್ಳುತ್ತದೆ.ನಿಮ್ಮ ಮಾತು ಒರಟಾಗುತ್ತದೆ ಅಥವಾ ಜಗಳ ಮಾಡುವ ರೀತಿಯಲ್ಲಿರುತ್ತದೆ. ನಿಯಂತ್ರಣ ಮಾಡಲು ಹೋದರು ಸಾಧ್ಯವಾಗುವುದಿಲ್ಲ. ಇನ್ನೊಬ್ಬರನ್ನು ಭಂಗಿಸಿದಾಗಲೇ ನಿಮಗೆ ಶಾಂತಿಯಾಗುವುದು.

ವಾಸ್ತವವಾಗಿ ನೀವು ಕೋಪ ಮಾಡಿಕೊಂಡಿರುತ್ತೀರಿ ಎಂಬುದು ನಿಮಗೆ ತಿಳಿಯುವುದಿಲ್ಲ. ಘಟನೆ ನಡೆದ ಬಳಿಕ ಇಷ್ಟೆಲ್ಲಾ ಕೂಗಾಡಿದ್ದೇನೆಯೇ ಎಂದು ಅನಿಸುತ್ತದೆ.ಕಾರಣ ಬಿಪಿ ನೇ ಆಗಬೇಕೆಂದಿಲ್ಲ. ಇದಕ್ಕೆ ಮುಖ್ಯ ಕಾರಣ ನೀವು ಯಾರಿಗಾದರೂ ಸಮರ್ಪಕವಾಗಿ ಸ್ಪಷ್ಟನೆ ಕೊಡಲಾಗದಿದ್ದಲ್ಲಿ ನಿಮ್ಮನ್ನು ಅನುಮಾನಿಸುತ್ತಿದ್ದಲ್ಲಿ ಇಂತಹ ಸಮಸ್ಯೆ ಉದ್ಭವವಾಗುತ್ತದೆ. ಇದು ಒಂದು ರೀತಿಯ ಸಮಸ್ಯೆ.ಬೇರೆ ವೈದ್ಯಕೀಯ ಕಾರಣಗಳೂ ಇರಬಹುದು.